Thursday, September 16, 2010

ಮೌನ ಒಂದು
ಹೆಣ್ಣ ಕಣ್ಣ ರೆಪ್ಪೆಯ ಮಿಡಿತದ ತಾಳ -ಅವಳ
ತುಟಿಯಂಚಿನ ಮಿಂಚಿನ ರಾಗ  ಕೇಳದವರಿಗೆ
ಮೌನದ ಮಾತು ತಿಳಿಯದು.

ಗಾಳಿಗೆ ತೂಗುವ ಮರದೆಲೆಗಳ  ನಾದ
ನದಿಮೇಲೆ ಬೀಸುವ ಗಾಳಿಯ ಕಲರವ
ಆಲಿಸದವರಿಗೆ ಮೌನದ ಮಾದುರ್ಯ ತಿಳಿಯದು.

ಪ್ರೇಮಿಗಳ ಮೈ  ಮನಸ್ಸು   ಕೂಡಿದಾಗ ಏಳುವ
ಉಸಿರಿನ ಏರಿಲಿತದ   ಹಾಡು ಕೇಳದವರಿಗೆ
ಮೌನದ ಸೌಂದರ್ಯ ತಿಳಿಯದು.

ಮೌನ ಎರಡು  

ಬಿರುಗಾಳಿಗೆ ಮೊದಲ ನಿಶಬ್ದ ಘೋರ .
ಇಬ್ಬರ ನಡುವಿನ ಒಬ್ಬರ ಮೌನದ
ಆ ನೋವು ತೀರ.
ಪ್ರಿಯರ ಸಾವಿನ (ಅ)ನ್ಥರದ 
ಶೂನ್ಯ ಕ್ರೂರ.

ಹೇಳೇ  ಗೆಳತಿ ಮೊದಲನೆಯ ಮೌನ ಮಿಥ್ಯ ವಾದರೆ
ಎರಡನೆಯ ಮೌನ ಸತ್ಯವೇ ?
ಇಲ್ಲ ಎರಡನೆಯ ಮೌನ ಸುಳ್ಳಾದರೆ
ಮೊದಲನೆಯದು ನಿಜವೇ ?
ಹೀಗೆ ಗೆಳತಿ ಮಾತು ಅರ್ಥಹೀನ ಶಬ್ದ -ಯಾರು ಕೇಳುವುದಿಲ್ಲ  
ಕೇಳುವ ಕಿವಿಗಳಿಗೆ ಮೌನ ಒಂದೇ ಶಾಶ್ವತ !
  

No comments:

Post a Comment

Blog Archive