Tuesday, September 18, 2012


  1. ಹೊಸ ವರುಷವ ಬರಮಾಡಿಕೊಳ್ಳುವ ರಾತ್ರಿಗಳಲಿ

          ಬಾರುಗಳಲ್ಲಿ  ತುಂಬಿ ಕುಣಿವ ಜನ , ಬೆಳಗ್ಗೆ ಗುಡಿಗಳಲ್ಲಿ

          ನೂಕಿ ನುಗ್ಗಾಡುತ್ತಿದ್ದರು ಮತ್ತಿನಲಿ !

               ***

  1. ನಿನ್ನ ನಾ ಪ್ರೀತಿಸಿ ನನ್ನ ನಾ ಕಳೆದುಕೊಂಡದ್ದು

          ನನ್ನ ಬಾಳಿನ ಗೆಲುವು ಹೌದು-ಸೋಲು ಹೌದು

              ***

  1. ಗಡಿಯಾರದ ಅಂಗಡಿಯಲ್ಲಿ ನಿಂತು

           ಸರಿಯಾದ ಗಂಟೆ ನೋಡುವಷ್ಟೇ ಪ್ರಯಾಸ

           ಈ ಜೀವನದಲ್ಲಿ ಒಳ್ಳೆಯ ಸ್ನೇಹಿತನ

           ಹುಡುಕುವ ಸಾಹಸ

             ***

  1. ನನ್ನ ವೈನ್ ಗ್ಲಾಸಿನಲಿ

          ನಿನ್ನ ಕಣ್ಣ ಬಿಂಬ –

          ವೈನಿಗೆ ಮತ್ತಷ್ಟು ಮತ್ತು ಸೇರಿತು,

          ನೀನು ಗ್ಲಾಸಿಗೆ ತುಟಿಯಿಟ್ಟಾಗ

         ಮತ್ತಷ್ಟು ಮತ್ತೆಚ್ಚಿ ನನ್ನ ನಾಲಿಗೆ

         ತೊದಲಿತು !

            ***

  1. ಊಟಿಯಲ್ಲಿ ಎಲ್ಲರೂ

ಉಣ್ಣೆ ಉಡುಪು ಧರಿಸಿ ಬೆಚ್ಚಗೆ ಓಡಾಡುವುದ

          ನೋಡಿದಾಗ –

          ನನ್ನವಳ ಬಿಸಿ ಅಪ್ಪುಗೆಯ

          ನೆನಪಾಯಿತು

           ***

 

  1. ಮೊಬೈಲ್ ಫೋನಿನ ರೇಡಿಯೊ ವೇವ್ಗಳಿಂದ

           ಕಾಣೆಯಾಗಿದ್ದ ಗುಬ್ಬಚ್ಚಿಗಳ ಊಟಿಯಲ್ಲಿ

           ಅಲ್ಲಿ ಇಲ್ಲಿ ಒಂದಿಷ್ಟು ನೋಡಿ-ಅವುಗಳ

          ಚಿಲಿಪಿಲಿ ಕೇಳಿದಾಗ, ಮನುಷ್ಯನಿಗೆ ಒಂದಿಷ್ಟು ಕರುಣೆ

          ಉಳಿಸಿದ ದೇವರ ಬಗ್ಗೆಯ ನಂಬಿಕೆ

          ಸ್ವಲ್ಪ ಬಲವಾಯಿತು

               ***

  1. ಬಂಡೀಪುರದಲ್ಲಿ ಫೋಟೋ ತೆಗೆಯುತ್ತಿದ್ದಾಗ

          ಹರಿಣಿಯೊಂದು ಮುಖ ತಿರುಗಿಸಿ ಪೋಸ್

          ಕೊಟ್ಟಾಗ – ಬಿಂಕದ ತರುಣಿಯರ

          ನೆನಪಾಗಿ ನಗು ಬಂತು

              ***

 

  1. ನಾನು ಮಾತ್ರವೇ ಆಗಿದ್ದದ್ದು

         ನಾನು ಸಹಾ ಎಂದಾಗಿ

         ನಂತರ ನಾನೂ ನೀನೂ ಆಗಿ,

         ಈಗ ನಾವಾಗಿ  ಮಾತ್ರ ಉಳಿದಿದೆ !

 

No comments:

Post a Comment

Blog Archive